ರಾಜ್ಯಇಂದು ಮಾಜಿ ಸಚಿವ, ಹಿರಿಯ ನಾಯಕ ಡಿ ಬಿ ಚಂದ್ರೇಗೌಡ ಅಂತ್ಯಕ್ರಿಯೆ: ಅಂತಿಮ ದರ್ಶನ ಪಡೆಯಲಿರುವ ಸಿಎಂ ಸಿದ್ದರಾಮಯ್ಯ
ಮೊನ್ನೆ ಸೋಮವಾರ ರಾತ್ರಿ ನಿಧನರಾದ ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ(Daradahalli Byregowda Chandregowda ) ಅವರ ಅಂತ್ಯ ಸಂಸ್ಕಾರ ಇಂದು ಬುಧವಾರ ಅವರ ಹುಟ್ಟೂರು ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ನೆರವೇರಲಿದೆ. ಮೂಡಿಗೆರೆ ತಾಲೂಕಿನ ದಾರದಹಳ್ಳಿ ಬಳಿಯ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ.