ದೇಶಕೇರಳ: ಕೊಚ್ಚಿಯ ಕುಸಾಟ್ ಟೆಕ್ ಉತ್ಸವದಲ್ಲಿ ಕಾಲ್ತುಳಿತ, ನಾಲ್ವರು ವಿದ್ಯಾರ್ಥಿಗಳು ಸಾವು, 60 ಮಂದಿಗೆ ಗಾಯ
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (ಕುಸಾಟ್) ಸ್ಕೂಲ್ ಆಫ್ ಇಂಜಿನಿಯರಿಂಗ್ ಶನಿವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.