ದೇಶಒಡಿಶಾ; ಮನೆ ಮುಂದೆ ನಿಂತಿದ್ದವರ ಮೇಲೆ ಕಚ್ಚಾ ಬಾಂಬ್ ದಾಳಿ, ಇಬ್ಬರಿಗೆ ಗಾಯ
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆಸಿದ ಕಚ್ಚಾ ಬಾಂಬ್ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಲ್ಲಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಶನಿವಾರ ನಿರಂಜನ್ ದಾಸ್ (27) ಮತ್ತು ಶ್ರೀನಿವಾಸ್ ದಾಸ್ (25) ತಮ್ಮ ಮನೆಯ ವರಾಂಡಾದಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.