ವಿಶೇಷಪರಿಸರಸ್ನೇಹಿ ದೀಪಾವಳಿ: ಮೈಸೂರಿನ ಹಲವು ಮನೆಗಳಲ್ಲಿ ಬೆಳಗಲಿದೆ ಹಸುವಿನ ಸಗಣಿಯ ದೀಪ!
ಈ ಬಾರಿ ಕೊರೋನಾ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ನಡುವೆ ಮೈಸೂರಿನ ಹಲವು ಕುಟುಂಬಗಳು ಈ ಬಾರಿ ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಮುಂದಾಗಿದ್ದು ಸಾಮಾನ್ಯ ಮಣ್ಣಿನ ಹಣತೆಯ ಬದಲಿಗೆ ಪರಿಸರ ಸ್ನೇಹಿ ಹಸುವಿನ ಸಗಣಿಯಿಂದ ಮಾಡಿದ್ದ ದೀಪಗಳನು ಹಚ್ಚಿ ದೀಪಾವಳಿ ಆಚರಣೆಗೆ ನಿರ್ಧರಿಸಿವೆ.