COVID positive

ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್ ಪತ್ತೆ: ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್
ರಾಜ್ಯದಲ್ಲಿ ಕೊರೊನಾ ಭೀತಿ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.

ಕೋವಿಡ್ ವಿಷಯದಲ್ಲಿ ಭಾರತವನ್ನು ಚೀನಾಕ್ಕೆ ಹೋಲಿಕೆ ಮಾಡುವುದು ಬೇಡ, ಆತಂಕಪಡುವುದು ಬೇಡ, 12 ಮಂದಿಯಲ್ಲಿ ಪಾಸಿಟಿವ್: ಡಾ ಕೆ ಸುಧಾಕರ್
ಓಮಿಕ್ರಾನ್ ವೈರಸ್ ಬಂದು ಒಂದು ವರ್ಷದ ಮೇಲಾಗಿದೆ, ಕೋವಿಡ್ ಬಂದಾಗ ಏನು ಮಾಡಬೇಕು, ಹೇಗಿರಬೇಕು ಎಂಬ ಅನುಭವ ನಮಗಾಗಿದೆ. ಹೀಗಾಗಿ ಪಾಸಿಟಿವ್ ಬಂದ ಕೂಡಲೇ ಜನರು ಆತಂಕಕ್ಕೊಳಗಾಗಬೇಕಾದ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ರ್ಯಾಂಡಮ್ ಕೊರೋನಾ ಟೆಸ್ಟ್: ಕೆಲವರಲ್ಲಿ ಪಾಸಿಟಿವ್ ವರದಿ
ನಿನ್ನೆ ಭಾನುವಾರ ದೆಹಲಿ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರ ಯಾದೃಚ್ಛಿಕ ಕೋವಿಡ್ ಪರೀಕ್ಷೆಯು(Random covid test) ಎರಡನೇ ದಿನವಾದ ಇಂದು ಸೋಮವಾರವೂ ಮುಂದುವರಿದಿದೆ. ಕೆಲವು ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಎರಡನೇ ಬಾರಿ ಕೋವಿಡ್ ಸೋಂಕು ದೃಢ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಭಾನುವಾರ ಕೋವಿಡ್–19 ದೃಢಪಟ್ಟಿದೆ. ಸ್ಮತಿ ಇರಾನಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಇದು ಎರಡನೇ ಬಾರಿ. 2020ರಲ್ಲಿಯೂ ಸೋಂಕು ತಗುಲಿತ್ತು.

ಮೀಜೊರಾಂನಲ್ಲಿ 44 ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢ
ಮಿಜೋರಾಂನಲ್ಲಿ 44 ಮಕ್ಕಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. 44 ಮಕ್ಕಳು ಸೇರಿದಂತೆ 214 ಜನರಿಗೆ ಕೋವಿಡ್ -19 ಸೋಂಕು ಪತ್ತೆಯಾಗುವುದರೊಂದಿಗೆ ಗುರುವಾರ ಒಟ್ಟು ಪ್ರಕರಣಗಳ ಸಂಖ್ಯೆ 1,40,143ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಧ್ಯ ಪ್ರದೇಶ: ಮೂರು ಡೋಸ್ ಲಸಿಕೆ ಹಾಕಿಸಿಕೊಂಡಿದ್ದ ಜರ್ಮನ್ ವ್ಯಕ್ತಿಗೂ ಕೋವಿಡ್ ಪಾಸಿಟಿವ್
ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯುರೋಪಿಯನ್ ರಾಷ್ಟ್ರದಲ್ಲಿ ವೈರಾಲಜಿ ಸಂಶೋಧಕರಾಗಿರುವ 28 ವರ್ಷದ ಜರ್ಮನ್ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರು ವೈದ್ಯನಿಗೆ ಮತ್ತೆ ಕೋವಿಡ್ ಪಾಸಿಟಿವ್!: ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಕೆ
ಓಮಿಕ್ರಾನ್ ಸೋಂಕು ಪೀಡಿತರಾಗಿದ್ದ ಬೆಂಗಳೂರು ವೈದ್ಯರಲ್ಲಿ ಮೊದಲ ಪರೀಕ್ಷೆಯ 15 ದಿನಗಳು ಕಳೆದರೂ ಕೋವಿಡ್-19 ಸೋಂಕು ಸಕ್ರಿಯವಾಗಿರುವುದು ಕಂಡುಬರುತ್ತಿದೆ.

ಬೆಂಗಳೂರು: ಒಂದೇ ಶಾಲೆ 33 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು; ಪೋಷಕರಲ್ಲಿ ಮನೆ ಮಾಡಿದ ಆತಂಕ
ನಗರದ ದೊಮ್ಮಸಂದ್ರದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ 33 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್
ಮುಖ್ಯಮಂತ್ರಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳಿಗೆ ಕೋವಿಡ್-19 ಪಾಸಿಟಿವ್ ಸೋಮವಾರ ದೃಢಪಟ್ಟಿದೆ. ಇದರಿಂದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

