ವಿದೇಶಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್! ಮಾರಕ ರೋಗಕ್ಕೆ 3,434 ಮಂದಿ ಬಲಿ
ಯುರೋಪ್ ರಾಷ್ಟ್ರ ಸ್ಪೇನ್ ನಲ್ಲಿ ಕೊರೋನಾ ಸಾವಿನ ಪ್ರಕರಣ ಮಿತಿಮೀರಿದ್ದು ಕೊರೋನಾ ಜನ್ಮದಾತ ರಾಷ್ಟ್ರ ಚೀನಾವನ್ನು ಮೀರಿಸಿದೆ. ಸ್ಪೇನ್ ನಲ್ಲಿ ಇದುವರೆಗೆ 3,434 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ ಇಪ್ಪತ್ತನಾಲ್ಕು ತಾಸಿನಲ್ಲಿ ಒಟ್ಟಾರೆ 738 ಮಂದಿ ಸಾವಿಗೀಡಾಗಿದ್ದಾರೆ.