ಆರೋಗ್ಯಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ
ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಗರ್ಭಿಣಿಯರ ಆರೈಕೆ ಮತ್ತು ಪ್ರಸವ ನಂತರ ಸೌಂದರ್ಯ ಹಿಂಪಡೆಯಲು ವೈದ್ಯಕೀಯ ನೆರವು ಪಡೆದುಕೊಳ್ಳಬಹುದು.