ರಾಜಕೀಯಕುಕ್ಕರ್ ಸ್ಫೋಟ ಪ್ರಕರಣ ಕುರಿತು ಹೇಳಿಕೆ: ಕ್ಷಮೆಯಾಚಿಸಿ, ಇಲ್ಲವೇ ಉಗ್ರ ಸಂಘಟನೆಯ ಬೆಂಬಲಿಗರೆಂದು ಒಪ್ಪಿಕೊಳ್ಳಿ- ಡಿಕೆಶಿಗೆ ಪ್ರಹ್ಲಾದ್ ಜೋಶಿ
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಆಗ್ರಹಿಸಿದರು.