ದೇಶರಮೇಶ್ ಕುಮಾರ್ ಹೇಳಿಕೆ ಅತ್ಯಂತ ದುಃಖಕರ, ದುರದೃಷ್ಟ, ಅಸಹ್ಯಕರ: ರಾಷ್ಟ್ರೀಯ ಮಹಿಳಾ ಆಯೋಗ ಖಂಡನೆ
ಅತ್ಯಾಚಾರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು"ಅತ್ಯಂತ ದುಃಖಕರ, ದುರದೃಷ್ಟದ ಹೇಳಿಕೆಯಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ ಎಂದಿದ್ದಾರೆ.