ರಾಜ್ಯಬೆಂಗಳೂರು: ಮತ್ತೊರ್ವ ಗುತ್ತಿಗೆದಾರನ ಅಪಾರ್ಟ್ ಮೆಂಟ್ ಮೇಲೆ ಐಟಿ ದಾಳಿ, 40 ಕೋಟಿ ರೂ. ವಶ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಆರ್ ಅವರ ನಿವಾಸದಲ್ಲಿ 42 ಕೋಟಿ ರುಪಾಯಿ ಪತ್ತೆಯಾದ ಬೆನ್ನಲ್ಲೇ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಶನಿವಾರ ನಗರದಲ್ಲಿನ ಮತ್ತೋರ್ವ ಗುತ್ತಿಗೆದಾರರ ಅಪಾರ್ಟ್ಮೆಂಟ್ನಿಂದ 40 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.