ದೇಶ'ಸಂವಿಧಾನವೇ ನನಗೆ ಸುಪ್ರೀಂ, ಯಾವುದೇ ಒತ್ತಡವಿಲ್ಲ': ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ
ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಮೇಲೆ ಕೇಂದ್ರ ಸರ್ಕಾರದ ಒತ್ತಡ ಇದೆ ಎಂಬ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು, ನನಗೆ ಯಾವುದೇ ಒತ್ತಡ ಇಲ್ಲ. ಸಂವಿಧಾನವೇ ನನಗೆ ಸುಪ್ರೀಂ ಎಂದು ಗುರುವಾರ ಹೇಳಿದ್ದಾರೆ.