ದೇಶಗುಜರಾತ್ ಚುನಾವಣೆ: ಕೈ ಜೊತೆ ಮೈತ್ರಿ ಮಾಡಿಕೊಂಡ ಎನ್ ಸಿಪಿಗೆ 3 ಸೀಟು
ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಎನ್ ಸಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಇದರಿಂದಾಗಿ ರಾಜ್ಯದ ಒಟ್ಟು 182 ಸ್ಥಾನಗಳ ಪೈಕಿ 3 ಕ್ಷೇತ್ರಗಳಲ್ಲಿ ಎನ್ ಸಿಪಿ ಸ್ಪರ್ಧಿಸಲಿದೆ. ಉಭಯ ಪಕ್ಷಗಳ ಮುಖಂಡರು ಶುಕ್ರವಾರ ಇದನ್ನು ಪ್ರಕಟಿಸಿದ್ದಾರೆ.