ರಾಜಕೀಯವಿಧಾನ ಪರಿಷತ್ತು: ಮನ್ಸೂರ್ ಖಾನ್ ಬದಲಿಗೆ ಉಮಾಶ್ರೀ; ಕಾಂಗ್ರೆಸ್ ನಿಂದ ಮೂವರ ಹೆಸರು ಮೇಲ್ಮನೆಗೆ ಬಹುತೇಕ ಅಂತಿಮ
ಎರಡು ತಿಂಗಳಿನಿಂದ ಬಾಕಿ ಉಳಿದಿರುವ ಮೂರು ಸ್ಥಾನ ತೆರವಾಗಿರುವ ವಿಧಾನಪರಿಷತ್ ಅಥವಾ ಮೇಲ್ಮನೆ ಸ್ಥಾನಗಳಿಗೆ ಶೀಘ್ರವೇ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಆಡಳಿತಾರೂಢ ಕಾಂಗ್ರೆಸ್ ನಿಂದ ಎಂ.ಆರ್.ಸೀತಾರಾಮ್, ಎಚ್.ಪಿ.ಸುಧಾಮ್ ದಾಸ್ ಮತ್ತು ಉಮಾಶ್ರೀ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.