Congress 5 guarantees

ಜುಲೈ 7ರಂದು ಬಜೆಟ್ ಮಂಡನೆ: 'ಗ್ಯಾರಂಟಿ' ಅನುಷ್ಠಾನಕ್ಕೆ ಸರ್ಕಾರದಿಂದ ಸಂಪನ್ಮೂಲ ಸಂಗ್ರಹ ಹೇಗೆ? ಆರ್ಥಿಕ ತಜ್ಞರು ಏನಂತಾರೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಜುಲೈ 7ರಂದು ಮಂಡಿಸಲಿರುವ ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಹೇಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತದೆ, ಹೆಚ್ಚುವರಿ ಅನುದಾನವನ್ನು ಯಾವ ರೀತಿ ಬಿಡುಗಡೆ ಮಾಡುತ್ತದೆ ಎಂಬುದೇ ಎಲ್ಲರ ಕುತೂಹಲ.

ಕಾಂಗ್ರೆಸ್ ನ ಮೂರು ಗ್ಯಾರಂಟಿಗಳಿಗೆ ಅನುಮೋದನೆ?: ಸರ್ಕಾರಕ್ಕೆ ನೀಲನಕ್ಷೆ ಸಲ್ಲಿಸಿದ ಹಣಕಾಸು ಇಲಾಖೆ
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಶುಕ್ರವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಅದರಲ್ಲಿ ಮೂರು ಗ್ಯಾರಂಟಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜೂನ್ 1ಕ್ಕೆ ಎರಡನೇ ಸಚಿವ ಸಂಪುಟ ಸಭೆ: ಅಂದೇ ಕಾಂಗ್ರೆಸ್ '5 ಗ್ಯಾರಂಟಿ' ಯೋಜನೆಗಳ ಜಾರಿ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ದಿನಗಳು ಕಳೆದಿದೆ. ಚುನಾವಣಾ ಪೂರ್ವ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಪ್ರತಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದರೆ ಇತ್ತ ಸಾರ್ವಜನಿಕರು ಕೂಡ ಒತ್ತಡ ಹಾಕುತ್ತಿದ್ದಾರೆ.

