ರಾಜ್ಯ'ನಿಮ್ಮ ಹೆಸರು, ಊರು, ಜಾತಿ ಹೇಳಿ': ಸ್ವ ಕ್ಷೇತ್ರದಲ್ಲಿ ಬಲವಂತ ಮತಾಂತರ ಬಗ್ಗೆ ವರದಿ ನೀಡಲು ಸ್ವತಃ ಸಮೀಕ್ಷೆಗಿಳಿದ ಶಾಸಕ ಗೂಳಿಹಟ್ಟಿ ಶೇಖರ್!
ಹೊಸದುರ್ಗ ಚರ್ಚ್ ನಲ್ಲಿ ನಿನ್ನೆ ಭಾನುವಾರ ಕ್ರೈಸ್ತ ಧರ್ಮೀಯರು ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಬರುವ ವೇಳೆ ವಿಚಿತ್ರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮತ್ತು ಅವರ ಬೆಂಬಲಿಗರು ಚರ್ಚ್ ನ ಗೇಟ್ ಮುಂದೆ ನಿಂತು ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುವವರೆಲ್ಲರಲ್ಲಿಯೂ ಅವರ ಹೆಸರೇನು, ಎಲ್ಲಿಂದ ಬಂದಿದ್ದಾರೆ, ಅವರ ಜ