community transmission

ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣವನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ
ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣದ ಹಂತದಲ್ಲಿರುವುದನ್ನು ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಾನುವಾರ ಒಪ್ಪಿಕೊಂಡಿದ್ದಾರೆ.

ದೇಶದಲ್ಲಿ ಕೊರೋನಾ ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ: ಕೇಂದ್ರ ಸರ್ಕಾರ
ಭಾರತದಲ್ಲಿ ಕೊರೋನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿದೆ, ಕೇಂದ್ರದ ಘೋಷಣೆಯೊಂದೇ ಬಾಕಿ: ಸಚಿವ ಸತ್ಯೇಂದರ್ ಜೈನ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಸಮುದಾಯ ಹಂತ ತಲುಪಿದ್ದು, ಕೇಂದ್ರ ಸರ್ಕಾರ ಘೋಷಣೆಗಾಗಿ ಕಾಯುತ್ತಿದ್ದೇವೆಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಮಂಗಳವಾರ ತಿಳಿಸಿದ್ದಾರೆ.

ಪಂಜಾಬಿನಲ್ಲಿ ಸಾಮುದಾಯಿಕ ಹಂತಕ್ಕೆ ಕೊರೋನಾ ಸೋಂಕು, ಲಾಕ್ ಡೌನ್ ವಿಸ್ತರಣೆ: ಅಮರೀಂದರ್ ಸಿಂಗ್
ಪಂಜಾಬಿನಲ್ಲಿ ಯಾವುದೇ ವಿದೇಶಿ ಪ್ರವಾಸ ಹಿನ್ನೆಲೆ ಹೊಂದಿಲ್ಲದಿದ್ದರೂ 27 ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ ಸಮುದಾಯ ಪ್ರಸರಣ ಘಟ್ಟಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಕೋವಿಡ್-19 ಸಮುದಾಯದಲ್ಲಿ ಹರಡಿಲ್ಲ, ಕೇವಲ ಓರ್ವನ ಬೇಜವಾಬ್ದಾರಿಯೂ ವೈರಸ್ ಉಲ್ಬಣಕ್ಕೆ ಕಾರಣವಾದೀತು: ಕೇಂದ್ರ
ಭಾರತದಲ್ಲಿ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿತರ ಹೊಸ 92 ಪ್ರಕರಣಗಳು ವರದಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೋನಾ ಸೋಂಕು ಸಮುದಾಯ ಪ್ರಸರಣ ಹಂತ ತಲುಪಿದೆ:ಆತಂಕ ತಂದಿದೆ ಅಧಿಕಾರಿಯೊಬ್ಬರ ಹೇಳಿಕೆ
21 ದಿನಗಳ ಲಾಕ್ ಡೌನ್ ನೀಡಿ ಮುನ್ನೆಚ್ಚರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದರೂ ಕೂಡ ಭಾರತದಲ್ಲಿ ಕೊರೋನಾ ಸೋಂಕು ಮೂರನೇ ಅಥವಾ ಸಮುದಾಯ ಹರಡುವಿಕೆ ಹಂತಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಸಿಕ್ಕಿದೆ.

ಕೊರೋನಾ ವೈರಸ್ ಸಮುದಾಯದಲ್ಲಿ ಹರಡಿಲ್ಲ, ಪ್ರಮಾಣ ಸ್ಥಿರವಾಗಿದೆ: ಕೇಂದ್ರ ಆರೋಗ್ಯ ಸಚಿವಾಲಯ
ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಏರಿಕೆಯಾಗುತ್ತಿರುವುದು ಸೋಂಕು ಸಮುದಾಯದಲ್ಲಿ ಹರಡಿದೆಯೇ ಎಂಬ ಆತಂಕ ಮೂಡಿತ್ತು. ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಆತಂಕ ದೂರ ಮಾಡಿದೆ.

