ರಾಜ್ಯಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ: 168 ಸಾಮಾನ್ಯ ಬೆಡ್ ಆಕ್ಸಿಜನ್ ಯುಕ್ತ ಬೆಡ್ ಗಳಾಗಿ ಪರಿವರ್ತನೆ
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 168 ಸಾಮಾನ್ಯ ಬೆಡ್ ಗಳನ್ನು ಆಕ್ಸಿಜನ್ಯುಕ್ತ ಬೆಡ್ ಗಳನ್ನಾಗಿ ಪರಿವರ್ತಿಸಲು ಸೂಚಿಸಲಾಗಿದೆ. ಸದ್ಯ ನಗರದ ಕೋವಿಡ್ ಸೋಂಕಿತರ ಆರೈಕೆ ಕೇಂದ್ರಗಳಲ್ಲಿ 2 ಸಾವಿರ ಬೆಡ್ ಗಳು ಲಭ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.