ಕ್ರಿಕೆಟ್ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅಲಭ್ಯ: ಕೋಚ್ ರಾಹುಲ್ ದ್ರಾವಿಡ್
ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ನಿರಾಸೆಯ ಸುದ್ದಿಯೊಂದನ್ನು ನೀಡಿದ್ದು, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಭಾರತ ತಂಡದ ಮೊದಲೆರಡು ಪಂದ್ಯಗಳಿಗೆ ತಂಡದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ.