ರಾಜ್ಯಸ್ವ ನಿರ್ಬಂಧನದಲ್ಲಿರುವ ಸಿಎಂ ಯಡಿಯೂರಪ್ಪ: ಮನೆಯಲ್ಲಿ ಕುಳಿತು ಏನು ಮಾಡುತ್ತಿದ್ದಾರೆ?
ತಮ್ಮ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸ್ವ ನಿರ್ಬಂಧದಲ್ಲಿರುವ ಸಿಎಂ ಬಿ ಎಸ್ ಯಡಿಯೂರಪ್ಪ ತಮ್ಮ ದಿನನಿತ್ಯದ ರಾಜಕೀಯ ಚಟುವಟಿಕೆಗಳು, ಕೆಲಸ ಕಾರ್ಯಗಳಿಂದ ಬಿಡುವು ಸಿಕ್ಕ ವೇಳೆ ಮನೆಯಲ್ಲಿ ಪುಸ್ತಕ ಓದುವುದರಲ್ಲಿ ಮಗ್ನರಾಗುತ್ತಾರೆ.