ದೇಶಛತ್ತೀಸ್ಗಢದಲ್ಲಿ ಗುಂಪು ಘರ್ಷಣೆ: ಮತಾಂತರ ವಿರೋಧಿಸಿ ಚರ್ಚ್ಗಳಿಗೆ ಹಾನಿ, ಕಲ್ಲು ತೂರಾಟದಲ್ಲಿ ಎಸ್ಪಿಗೆ ಗಾಯ
ರಾಯ್ಪುರದಿಂದ ದಕ್ಷಿಣಕ್ಕೆ 350 ಕಿಮೀ ದೂರದಲ್ಲಿರುವ ಮಾವೋವಾದಿ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ನಡೆದ ಕಲ್ಲು ತೂರಾಟದಲ್ಲಿ ಪ್ರಮುಖ ಕ್ಯಾಥೋಲಿಕ್ ಚರ್ಚ್ ಅನ್ನು ಧ್ವಂಸಗೊಳಿಸಲಾಯಿತು ಮತ್ತು ಪ್ರತಿಭಟನಾಕಾರರ ಗುಂಪನ್ನು ತಡೆಯಲು ಯತ್ನಿಸಿದ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ್ ಕುಮಾರ್ ಅವರ ತಲೆಗೆ ಗಾಯವಾಗಿದೆ.