ಸುದ್ದಿಡೆಡ್ ಎಂಡ್ ಗೆ ಢಿಕ್ಕಿ ಹೊಡೆದು ಮೇಲಕ್ಕೆ ಜಿಗಿದ ರೈಲು; ಐವರಿಗೆ ಗಾಯ
ಭಾನುವಾರ ಮುಂಬೈನ ಚರ್ಚ್ ಗೇಟ್ ರೈಲ್ವೇ ನಿಲ್ದಾಣದ ಬಳಿ ಡೆಡ್ ಎಂಡ್ ಗೆ ಢಿಕ್ಕಿ ಹೊಡೆದ ಪ್ರಯಾಣಿಕರ ರೈಲ್ಲೊಂದು ಪ್ಲ್ಯಾಟ್ ಫಾರ್ಮ್ನಿಂದ ಮೇಲಕ್ಕೆ ಜಿಗಿದಿದೆ. ಎಂಜಿನ್ ನಿರ್ವಾಹಕ ಬ್ರೇಕ್ ಹಾಕಲು ವಿಫಲನಾದದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಈ ಘಟನೆಯಿಂದ ಐವರು ಗಾಯಗೊಂಡಿದ್ದಾರೆ.