ರಾಜ್ಯರಾಜ್ಯದಲ್ಲಿಂದು ನಮೋ ಅಬ್ಬರ: ಬೆಂಗಳೂರು, ತುಮಕೂರಿನಲ್ಲಿ ಮಿಂಚಿನ ಸಂಚಾರ, ದೇಶದ ಅತಿದೊಡ್ಡ ಕಾಪ್ಟರ್ ಘಟಕ ಸಮರ್ಪಣೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಎಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ನಡೆಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿಯವರು ರಾಜ್ಯ ರಾಜಧಾನಿ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿ ಒಂದೇ ದಿನ 6 ಪ್ರಮುಖ ಯೋಜನಗಳಿಗೆ ಚಾಲನೆ ನೀಡಲಿದ್ದಾರೆ.