ದೇಶಭಾರತದ ಒಳಗೆ ನುಗ್ಗಲು ಚೀನಾ ಸೈನಿಕರಿಗೆ ಧೈರ್ಯ ಬರಲಿಲ್ಲ ಎಂಬುದು ಮೋದಿ ಮಾತಿನ ಅರ್ಥ: ವಿಪಕ್ಷಗಳಿಗೆ ಪಿಎಂಒ ಸ್ಪಷ್ಟನೆ
ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ ಸೇನಾಪಡೆ ಗಡಿಭಾಗ ದಾಟಿ ಭಾರತದ ಪ್ರಾಂತ್ಯದೊಳಗೆ ಪ್ರವೇಶಿಸಿಲ್ಲ ಮತ್ತು ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ವಿಪಕ್ಷ ನಾಯಕರು ಮಾಡುತ್ತಿರುವ ಟೀಕೆ ಕುಚೇಷ್ಠೆಯ ವ್ಯಾಖ್ಯಾನವಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಶನಿವಾರ ಆರೋಪಿಸಿದೆ.