ದೇಶಗುರುತು ಹಾಕಿದಾಕ್ಷಣ ಜಾಗ ಒತ್ತುವರಿ ಆದಂತಲ್ಲ: ಅರುಣಾಚಲದಲ್ಲಿ ಚೀನಾ ಒಳನುಸುಳುವಿಕೆ ಆರೋಪಕ್ಕೆ ಕಿರಣ್ ರಿಜಿಜು ಪ್ರತಿಕ್ರಿಯೆ!
ಚೀನಾ-ಭಾರತದ ಗಡಿಯಲ್ಲಿನ ಅನಿರ್ದಿಷ್ಟ ಪ್ರದೇಶಗಳಲ್ಲಿ ಗಸ್ತು ತಿರುಗುವಾಗ ಭಾರತ ಮತ್ತು ಚೀನಾದ ಸೇನೆಗಳು ಕೆಲವೊಮ್ಮೆ ಪರಸ್ಪರ ಮುಖಾಮುಖಿಯಾಗುತ್ತವೆ. ಆದರೆ ಇದು ಭಾರತದ ಭೂಪ್ರದೇಶದ ಮೇಲೆ ಅತಿಕ್ರಮಣಕ್ಕೆ ಕಾರಣವಾಗುವುದಿಲ್ಲ ಎಂದು ಪಶ್ಚಿಮ ಅರುಣಾಚಲ ಪ್ರದೇಶದ ಸಂಸದ ರಿಜಿಜು ಹೇಳಿದ್ದಾರೆ.