Child trafficking

ಮಕ್ಕಳ ನಾಪತ್ತೆ-ಕಳ್ಳಸಾಗಣೆ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆ
ರಾಜ್ಯದಲ್ಲಿ ಹಲವಾರು ಮಕ್ಕಳನ್ನು ಅಪಹರಿಸುವ ಮತ್ತು ಕಾಣೆಯಾಗುವ ಪ್ರಕರಣಗಳು ವರದಿಯಾಗಿವೆ. ಅಂತಹ ಪ್ರಕರಣಗಳು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

4 ಲಕ್ಷ ರೂ ಗೆ 7 ವರ್ಷದ ಬಾಲಕನ ಮಾರಾಟ ಪ್ರಕರಣ: ನಾಲ್ವರ ಬಂಧನ; 3 ತಿಂಗಳಲ್ಲಿ ಇದು ಮೂರನೇ ಘಟನೆ!
ಶಿವಬಸಪ್ಪ ಮಗ್ದುಮ್ ಮತ್ತು ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಮಕ್ಕಳ ಕಳ್ಳಸಾಗಣೆ: ಟಾಪ್ 3 ನಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ; ಕರ್ನಾಟಕಕ್ಕೆ 4ನೇ ಸ್ಥಾನ!
ಕೋವಿಡ್ ಸಾಂಕ್ರಾಮಿಕದ ನಂತರ ಭಾರತದ ವಿವಿಧ ರಾಜ್ಯಗಳಲ್ಲಿನ ಮಕ್ಕಳ ಸಾಗಣೆ ಹೆಚ್ಚಾಗಿದ್ದು, ಹೆಚ್ಚು ಮಕ್ಕಳ ಸಾಗಣೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಟಾಪ್ 3 ರಲ್ಲಿದ್ದು, ಕರ್ನಾಟಕ 4ನೇ ಸ್ಥಾನದಲ್ಲಿದೆ.

ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ಐವರ ಬಂಧನ, 11 ಮಕ್ಕಳ ರಕ್ಷಣೆ
ಅಸಹಾಯಕ ಪೋಷಕರಿಂದ ನವಜಾತ ಶಿಶುಗಳನ್ನು ಪಡೆದು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪಶ್ಚಿಮ ವಲಯದ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ಘಟಕ ಪತ್ತೆ ಹಚ್ಚಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ರಾಜ್ಯ ಮತ್ತು ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಡವರಿಂದ ಮಕ್ಕಳು ಖರೀದಿಸಿ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದವರ ಬಂಧನ
ಮಕ್ಕಳಾಗದ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡಿಸುತ್ತೇವೆ ಎಂದು ಹೇಳಿ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಮಕ್ಕಳ ಕಳ್ಳಸಾಗಣೆ ಮತ್ತು ಮಾರಾಟದಲ್ಲಿ ತೊಡಗಿದ್ದ ತಾಯಿ-ಮಗಳ ಬಂಧನ
ನಂಜನಗೂಡು ಮಕ್ಕಳ ಕಳ್ಳ ಸಾಗಣೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಹೆಚ್ಚಿನ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಒಂದು ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಮತ್ತೊಂದು ಪ್ರಕರಣದ ಜಾಡು ಸಿಕ್ಕಿದೆ.

ಬೆಂಗಳೂರು: ಮಕ್ಕಳ ಕಳ್ಳ ಸಾಗಣೆ ಮಾಡಿದ ಮೂವರ ಬಂಧನ
ಜುಲೈ 9 ರಂದು ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಬಿಹಾರದಿಂದ ಬೆಂಗಳೂರಿಗೆ 8 ಬಾಲಕರನ್ನು ಕಳ್ಳಸಾಗಣೆ ಮಾಡಿ ಬಾಲ ಕಾರ್ಮಿಕ ಪದ್ಧತಿಗೆ ಒತ್ತಾಯಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದಾವಣಗೆರೆ: 'ಮೂಲ ನಕ್ಷತ್ರ'ದಲ್ಲಿ ಹುಟ್ಟಿತ್ತೆಂದು ಹೆಣ್ಣು ಮಗುವನ್ನು ಮಾರಾಟ ಮಾಡಿದ ಪೋಷಕರು
ಮೂಲ ನಕ್ಷತ್ರದಲ್ಲಿ ಹುಟ್ಟಿತ್ತೆಂಬ ಮೂಢನಂಬಿಕೆಯಿಂದ ಇಲ್ಲಿನ ಅಂಬೇಡ್ಕರ್ ನಗರದ ಪೋಷಕರು 1 ವರ್ಷದ ಹೆಣ್ಣು ಮಗುವನ್ನು ಮಕ್ಕಳಿಲ್ಲದ ಹಾವೇರಿಯ ದಂಪತಿಗೆ ಮಾರಾಟ ಮಾಡಿದ್ದಾರೆ.

ಮಕ್ಕಳ ಕಳ್ಳ ಸಾಗಣೆ: ರಾಜ್ಯದಲ್ಲಿ 1,680 ಪ್ರಕರಣಗಳು ದಾಖಲು, 5,577 ಮಂದಿ ಬಂಧನ
ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಕರ್ನಾಟಕದಲ್ಲಿ 2011-17ರ ನಡುವೆ 1,680 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಸಂಬಂಧ 5,577 ಆರೋಪಿಗಳನ್ನು ಬಂಧಿಸಿದೆ.

