ರಾಜ್ಯಚಿಕ್ಕಮಗಳೂರು ಜಿಲ್ಲೆಯ ಶೇ.75 ಮಂದಿ ಬಿಪಿಎಲ್ ಕಾರ್ಡು ಹೊಂದಿರುವವರು!
ಬಿಪಿಎಲ್ ಕಾರ್ಡು ಇರುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದ ಸೌಲಭ್ಯ ಪಡೆಯಲು. ಸರ್ಕಾರ ನೀಡಿರುವ ಬಿಪಿಎಲ್ ಕಾರ್ಡುಗಳ ಸಂಖ್ಯೆಯ ಪ್ರಕಾರವೇ ಹೋಗುವುದಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ.