ವಿದೇಶಉತ್ತರ ಚೀನಾದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ; ಇಬ್ಬರು ಸಾವು, 12 ಮಂದಿ ಕಣ್ಮರೆ
ಈಶಾನ್ಯ ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು 12 ಮಂದಿ ನಾಪತ್ತೆಯಾಗಿದ್ದಾರೆ. ರಾಜಧಾನಿ ಬೀಜಿಂಗ್ನ ಪೂರ್ವದಲ್ಲಿರುವ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದ ಹೊರವಲಯದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ 34 ಜನರು ಗಾಯಗೊಂಡಿದ್ದಾರೆ.