ದೇಶನಮೀಬಿಯಾದಿಂದ ಚೀತಾಗಳನ್ನು ಕರೆತರುವ ವಿಮಾನ, ಜೈಪುರ ಬದಲಿಗೆ ಗ್ವಾಲಿಯರ್ ನಲ್ಲಿ ಲ್ಯಾಂಡ್
ನಮೀಬಿಯಾದಿಂದ 8 ಚೀತಾಗಳನ್ನು ಕರೆತರುತ್ತಿರುವ ವಿಶೇಷ ಕಾರ್ಗೋ ವಿಮಾನ ಈ ಹಿಂದೆ ಯೋಜಿಸಿದ್ದಂತೆ ರಾಜಸ್ಥಾನದ ಜೈಪುರದ ಬದಲಿಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಲ್ಯಾಂಡ್ ಆಗಲಿದೆ. ನಂತರ ಈ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.