ಸಿನಿಮಾ ಸುದ್ದಿವಂಚನೆ ಪ್ರಕರಣಕ್ಕೆ ತೆರೆ: ವಿವಾದಕ್ಕೆ ಅಂತ್ಯ ಹಾಡೋಣ ಎಂದ ನಟ ದರ್ಶನ್, ಅವರು ಹೇಳಿದ್ದೇ ಫೈನಲ್ ಎಂದ ಉಮಾಪತಿ!
ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ತೆರೆ ಬಿದ್ದಿದೆ. ನಿರ್ಮಾಪಕ ಉಮಾಪತಿಯವರು ತಪ್ಪು ಮಾಡಿದ್ದಾರೆ ಎಂದು ನಾನು ಈಗಲೂ ಹೇಳುವುದಿಲ್ಲ, ಅವರು ನಿರ್ಮಾಪಕರು, ಯಾವತ್ತಿದ್ದರೂ ನಿರ್ಮಾಪಕರೇ, ನನಗೆ ಯಾವತ್ತಿದ್ದರೂ ಪ್ರೀತಿ, ಗೌರವ ಇರುತ್ತದೆ ಎಂದು ನಟ ದರ್ಶನ್ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ್ದಾರೆ.