ರಾಜ್ಯಈ ಚೌಡೇಶ್ವರಿ ದೇವಿಗೆ ಮದ್ಯ, ಸಿಗರೇಟು, ಗಾಂಜಾ ಹರಕೆಯ ವಸ್ತು!
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸುವಾಗ ಹೂವು, ಹಣ್ಣು ಇತ್ಯಾದಿಗಳನ್ನು ದೇವರಿಗೆ ಸಮರ್ಪಿಸುವುದು ಸಾಮಾನ್ಯ. ಆದರೆ ಗೋಕಾಕ್ ನ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಪ್ರೀತಿಯಿಂದ ಅರ್ಪಿಸುವುದು ಮದ್ಯ, ಸಿಗರೇಟು, ಗಾಂಜಾ ಮೊದಲಾದವುಗಳನ್ನು. ಇಲ್ಲಿ ಪೂಜೆ, ಸಂಪ್ರದಾಯಗಳಲ್ಲಿ ತೊಡಗಿರುವವರು ತೃತೀಯ ಲಿಂಗಿ ಸತೀಶ್ ರಾಮಣ್ಣ ತಲ್ವರ್.