ರಾಜ್ಯಇಸ್ರೊ ISTRAC ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಅಧ್ಯಕ್ಷ ಸೋಮನಾಥ್ ಸೇರಿ ವಿಜ್ಞಾನಿಗಳ ತಂಡಕ್ಕೆ ಸನ್ಮಾನ, ಅಭಿನಂದನೆ
ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಮೃದುವಾಗಿ ಇಳಿದ ಕ್ಷಣ ಎಲ್ಲ ಭಾರತೀಯರನ್ನು ರೋಮಾಂಚನಗೊಳಿಸಿದೆ. ಇದಕ್ಕೆ ಇಸ್ರೊ ಸಂಸ್ಥೆಯ ಇಡೀ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಅಭಿನಂದನಾರ್ಹರು. ವಿಶ್ವದ ನಾಲ್ಕೂ ಮೂಲೆಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.