Channapatna bypolls

ಸಿಪಿ ಯೋಗೇಶ್ವರ್ ವಿರುದ್ಧ ಮಾತನಾಡದಂತೆ ಮಲಮಗಳು ನಿಶಾ ವಿರುದ್ಧ ತಡೆಯಾಜ್ಞೆ ತಂದ ಪಿವಿ ಶೀಲಾ!
ಸಿಪಿ ಯೋಗೇಶ್ವರ್ ಪತ್ನಿ ಪಿ.ವಿ ಶೀಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಸಾಮಾಜಿಕ ಜಾಲತಾಣಗಳಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಿಶಾಗೆ ತಡೆಯಾಜ್ಞೆ ನೀಡಿದೆ.

ಮಂಗಳೂರು: ಚುನಾವಣೆ ಇದ್ದಾಗ ಮಾತ್ರ ಕುಮಾರಸ್ವಾಮಿ ಕಣ್ಣೀರು; ಜನ ಕಷ್ಟದಲ್ಲಿರುವಾಗ ಕಣ್ಮರೆ- ಡಿಕೆ ಶಿವಕುಮಾರ್
ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರೂ ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಏಕೆ ಬರಲಿಲ್ಲ. ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ?

ಮಾಜಿ ಪ್ರಧಾನಿ ಮೊಮ್ಮಗ, ಮಾಜಿ ಸಿಎಂ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟ: ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
"ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೆ. ಆದರೆ ತುಂಬಾ ನೋವುಗಳಿವೆ" ಎಂದು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದರು.

ಒಳ ಮೀಸಲಾತಿ ಜಾರಿಗೆ ಸಂಪುಟ ನಿರ್ಧಾರ: ಉಪ ಚುನಾವಣೆ ಮೇಲೆ ಪರಿಣಾಮ?
ಪ್ರತಿಯೊಂದು ಕ್ಷೇತ್ರಗಳಲ್ಲಿ ಸರಾಸರಿ 30,000-35,000 ಪರಿಶಿಷ್ಟ ಜಾತಿ ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ ಎಸ್‌ಸಿ (ಬಲ) ಮತದಾರರು ಪ್ರಾಬಲ್ಯ ಹೊಂದಿದ್ದರೆ, ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ಹೆಚ್ಚಿನ ಸಂಖ್ಯೆಯ ಎಸ್‌ಸಿ (ಎಡ) ಮತದಾರರಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ: ಇಬ್ಬರು ಒಕ್ಕಲಿಗ ಪ್ರಾಬಲ್ಯ ನಾಯಕರ ನಡುವಿನ ಕದನ
ಮಾಜಿ ಸಿಎಂ ಕುಮಾರಸ್ವಾಮಿ 2023 ರ ಚುನಾವಣೆಯಲ್ಲಿ ಮರದ ಆಟಿಕೆಗಳು ಮತ್ತು ಮೆರುಗೆಣ್ಣೆಗಳಿಗೆ ಹೆಸರುವಾಸಿಯಾದ ಚನ್ನಪಟ್ಟಣದಿಂದ ಗೆದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನೆರೆಯ ಕನಕಪುರದಿಂದ 1.2 ಲಕ್ಷ ಮತಗಳ ಅಂತರದಿಂದ ಚುನಾಯಿತರಾದರು.

ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ಹರಕೆಯ ಕುರಿ, NDA ಅಭ್ಯರ್ಥಿ ಗೆಲುವು ನಿಶ್ಚಿತ- ಆರ್ ಅಶೋಕ್
ಈ ಹಿಂದೆ ಸಿಎಂ ಸಿದ್ದರಾಮಯ್ಯ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸಿ, ಡ್ಯಾನ್ಸ್ ಮಾಡಿ, ಕಾಲು ನೋವಿಗೆ ಮಸಾಜ್ ಮಾಡಿಸಿಕೊಂಡಿದ್ದರು. ಇದೀಗ ಅವರದೇ ಪಕ್ಷದ ಶಾಸಕರೊಬ್ಬರು ಗಣಿ ಲೂಟಿ ಮಾಡಿ ಸಿಕ್ಕಿಬಿದ್ದಿದ್ದಾರೆ. ಗಣಿ ಲೂಟಿಗೆ ಕಾಂಗ್ರೆಸ್ ಕಾರಣ ಎಂಬುದು ಜನರಿಗೆ ಗೊತ್ತಿದೆ.

ಮುನಿರತ್ನ 'ಕುರುಕ್ಷೇತ್ರ'ಕ್ಕೆ ಬಿದ್ದ ಬೆಂಕಿಯಿಂದ ಚನ್ನಪಟ್ಟಣ ಉಪಚುನಾವಣೆ ಮೇಲೆ ಕರಿಛಾಯೆ? ಆತಂಕದಲ್ಲಿ ಕೇಸರಿ ಕಲಿಗಳು!
ಮುನಿರತ್ನ ವಿರುದ್ಧ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರು ಒತ್ತಾಯಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: BJP ಹೈಕಮಾಂಡ್ ಮೂಲಕ HDK ಮನವೊಲಿಸಲು ಯೋಗೇಶ್ವರ್ ಯತ್ನ..!
ಯೋಗೇಶ್ವರ್ ಅವರ ಬೇಡಿಕೆಗೆ ಕುಮಾರಸ್ವಾಮಿ ಮಣಿಯುವ ಸಾಧ್ಯತೆಯಿಲ್ಲ ಎನ್ನಲಾಗಿದ್ದು, ಚುನಾವಣೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.

