Central Silk Board junction

Silk Board Junction: ಜೂನ್ ವೇಳೆಗೆ 'ಡಬಲ್ ಡೆಕ್ಕರ್ ಮೇಲ್ಸೇತುವೆ' ಸಿದ್ಧ; ಸಿಲ್ಕ್ ಬೋರ್ಡ್ ಟ್ರಾಫಿಕ್ ಸಮಸ್ಯೆಗೆ ಗುಡ್ ಬೈ!
ಸಿಗ್ನಲ್ ಮುಕ್ತ ಎಲಿವೇಟೆಡ್ ರಸ್ತೆಯು ಲೋಕಾರ್ಪಣೆಯಾದರೆ ಬಿಎಂಟಿ ಲೇಔಟ್ ನಿಂದ ಕೆಆರ್ ಪುರಂ, ರಾಗಿಗುಡ್ಡದಿಂದ ಕೆಆರ್ ಪುರಂ ಮತ್ತು ರಾಗಿಗುಡ್ಡ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಲಿದೆ.

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಗುರುವಾರ ಸತತ 50 ಗಂಟೆಗಳ ಕಾಲ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ!
ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಕೆಲಸ ಬಿಎಂಆರ್ ಸಿಎಲ್ ನಿಂದ ನಡೆಯುತ್ತಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪೊಲೀಸರಿಗಾಗಿ ಬಿಎಂಆರ್'ಸಿಎಲ್'ನಿಂದ ಸಮುದಾಯ ಭವನ ನಿರ್ಮಾಣ
ಕೆಆರ್ ಪುರಂ-ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್‌ನ ಸಂಬಂಧಿತ ಕಾಮಗಾರಿಗಳಿಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಕಟ್ಟಡವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರಿಗಾಗಿ ಹೊಸ ಸಮುದಾಯ ಭವನವೊಂದನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಿರ್ಮಾಣ ಮಾಡುತ್ತಿದೆ.

