ದೇಶನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ 1, 161 ಕೋಟಿ ವಿಪತ್ತು ಪರಿಹಾರ ಬಿಡುಗಡೆ
ಪ್ರವಾಹ, ಭೂಕುಸಿತ, ಬರ ಮತ್ತಿತರ ಪ್ರಾಕೃತಿಕ ವಿಪತ್ತಿಗೆ ಒಳಗಾಗಿದ್ದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರಸರ್ಕಾರ ಇಂದು 1, 161 ಕೋಟಿ ರೂಪಾಯಿ ವಿಪತ್ತು ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.