ರಾಜ್ಯಮರಗಳ ಕಂಟಕವಾಗಿ ಪರಿಣಮಿಸಿದ ಸಿಮೆಂಟ್'ಯುಕ್ತ ಗುಂಡಿಗಳು!
ಸಿಲಿಕಾನ್ ಸಿಟಿ ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ಜೊತೆಗೆ ಹಸಿರು ಹೊದಿಕೆಗೆ ಕೊಡಲಿ ಪೆಟ್ಟುಗಳು ಬೀಳುತ್ತಲೇ ಇದೆ. ನಗರದ ಅಭಿವೃದ್ಧಿಗಾಗಿ ನಾನಾ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು. ಇದು ಮರಗಳ ಮೇಲೆ ಪರಿಣಾಮ ಬೀರುತ್ತಿವೆ. ರಸ್ತೆಗಳು ಅಭಿವೃದ್ಧಿಗೊಂಡಂತೆ ಮರಗಳು ಹಾನಿಗೊಳಗಾಗುತ್ತಿವೆ.