ರಾಜಕೀಯಸಿದ್ದು ನಿವಾಸದ ನಾಮಫಲಕ ತೆಗೆದ ಅಧಿಕಾರಿಗಳು: ಕಾವೇರಿಗಾಗಿ ಹಾಲಿ - ಮಾಜಿ ಸಿಎಂಗಳ ಪೈಪೋಟಿ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನೂ ತೆರವುಗೊಳಿಸಿಲ್ಲ. ಹೀಗಾಗಿ ಸರ್ಕಾರದ ಸೂಚನೆ ಮೇರೆಗೆ ಡಿಪಿಎಆರ್ ಅಧಿಕಾರಿಗಳು ಕಾವೇರಿ ನಿವಾಸದ ಮುಂದೆ ತೂಗುಹಾಕಿದ್ದ ಸಿದ್ದರಾಮಯ್ಯ ಹೆಸರಿನ ನಾಮಫಲಕವನ್ನು ಕಿತ್ತುಹಾಕಿದ್ದು, ಆ ಮೂಲಕ ಆದಷ್ಟುಬೇಗ ನಿವಾಸ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.