ರಾಜಕೀಯಶಾಸಕರ ಅನರ್ಹತೆ ವಿವಾದ: ಹೈಕೋರ್ಟ್ ಗೆ ದಿನೇಶ್ ಗುಂಡೂರಾವ್ ಕೇವಿಯಟ್
ಅನರ್ಹಗೊಂಡಿರುವ 8 ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ ತಮಗೆ ನೋಟಿಸ್ ನೀಡಿದ ನಂತರವೇ ಮಧ್ಯಂತರ ಆದೇಶ ಹೊರಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೈಕೋರ್ಟ್ ಗೆ ಕೇವಿಯಟ್ ಸಲ್ಲಿಸಿದ್ದಾರೆ.