ರಾಜ್ಯನೈಸರ್ಗಿಕ ಹರಿವನ್ನು ನಿಯಂತ್ರಿಸಲಾಗದು, ತಮಿಳುನಾಡಿಗೆ ನಿತ್ಯ 6,500 ಕ್ಯೂಸೆಕ್ ನೀರು ಹರಿಯುತ್ತಿದೆ: ಡಿಕೆ.ಶಿವಕುಮಾರ್
ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿಲ್ಲ. ಆದರೆ, ನೈಸರ್ಗಿಕ ಹರಿವು ನಿಯಂತ್ರಿಸಲಾಗದ ಕಾರಣ ನೆರೆ ರಾಜ್ಯಕ್ಕೆ ನಿತ್ಯ 6,500 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.