ದೇಶಕೊರೋನಾ ವೈರಸ್ ಕುರಿತು ಅರಿವು ಮೂಡಿಸಲು ಕಾಲರ್ ಟ್ಯೂನ್ ಬಳಕೆ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.