ರಾಜ್ಯಸೋಂಕಿತರಿಗೆ ಹಾಸಿಗೆ ನೀಡಿ, ಇಲ್ಲವೇ ವಿದ್ಯುತ್, ನೀರು ಸರಬರಾಜು ಕಡಿತ ಎದುರಿಸಿ: ಮಣಿಪಾಲ್ ಆಸ್ಪತ್ರೆ ಸಿಇಒಗೆ ಸಚಿವ ಖಡಕ್ ಎಚ್ಚರಿಕೆ
ಕೊರೋನಾ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆಗಳನ್ನು ನೀಡಿ ಸರ್ಕಾರದೊಂದಿಗೆ ಸಹಕಾರ ನೀಡದೇ ಹೋದಲ್ಲಿ ಆಸ್ಪತ್ರೆ ನೀಡಲಾಗುತ್ತಿರುವ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಗೊಳಿಸಲಾಗುತ್ತದೆ ಎಂದು ವೈಟ್'ಫೀಲ್ಡ್'ನಲ್ಲಿರುವ ಮಣಿಪಾಲ್ ಆಸ್ಪತ್ರೆಯ ಸಿಇಒಗೆ ಸಚಿವ ಭೈರತಿ ಬಸವರಾಜ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.