ದೇಶಚುನಾವಣಾ ಕರ್ತವ್ಯದ ನಂತರ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ: 21 ಮಂದಿಗೆ ಗಾಯ
ಚುನಾವಣಾ ಕರ್ತವ್ಯದ ನಂತರ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಶನಿವಾರ ನಸುಕಿನ ವೇಳೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಪಲ್ಟಿಯಾಗಿದ್ದು, 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.