ರಾಜ್ಯ'ಶಕ್ತಿ ಯೋಜನೆ'ಯಿಂದ ಹೆಚ್ಚಿದ ಬೇಡಿಕೆ: ಕೆಎಸ್ ಆರ್ ಟಿಸಿಯಿಂದ 350 ಹೊಸ ಬಿಎಸ್ VI ಎಕ್ಸ್ ಪ್ರೆಸ್ ಬಸ್ಸುಗಳ ಸೇರ್ಪಡೆ
ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚುತ್ತಿರುವ ಸರ್ಕಾರಿ ಬಸ್ಗಳ ಬೇಡಿಕೆಯನ್ನು ಪೂರೈಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 350 ಬಿಎಸ್ VI ಎಕ್ಸ್ಪ್ರೆಸ್ ಬಸ್ಗಳನ್ನು ಸಂಚಾರಕ್ಕೆ ನಿಯೋಜಿಸಲಿದೆ. ಬಸ್ ಸಂಚಾರಕ್ಕೆ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಬಸ್ಗಳನ್ನು ನಿಯೋಜಿಸಲಾಗುವುದು.