broadband internet

ಏಳು ತಿಂಗಳ ನಂತರ ಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಪುನಾರಂಭ
ಕಾಶ್ಮೀರದಲ್ಲಿ ಗುರುವಾರದಿಂದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಈ ಮೂಲಕ ಅಂತ್ಯವಾಗಿದೆ.

ಎರಡು ತಿಂಗಳಲ್ಲಿ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ ನೆಟ್ ಸೌಲಭ್ಯ
ಕರ್ನಾಟಕದ ಎಲ್ಲಾ 6,092 ಗ್ರಾಮ ಪಂಚಾಯತ್ ಗಳಿಗೆ 100 ಎಂಬಿಪಿಎಸ್ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸಂಪರ್ಕವನ್ನು ನೀದಲಾಗುವುದು ಎಂದು ಟೆಲಿಕಾಂ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ಅರುಣಾ ಸುಂದರಾಜನ್ ತಿಳಿಸಿದ್ದಾರೆ.

