ದೇಶಕೇರಳ: ತ್ರಿಶೂರ್ ಪೂರಂ ಉತ್ಸವ ವೇಳೆ ಮರದ ಕೊಂಬೆ ಮುರಿದು ಬಿದ್ದು ಇಬ್ಬರು ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ
ತ್ರಿಶೂರ್ ಪೂರಂನ ಅಂಗವಾಗಿ ನಡೆದ ಮದತಿಲ್ ವರವು ಮೆರವಣಿಗೆಯಲ್ಲಿ ಭಕ್ತರು ಮತ್ತು ತಾಳವಾದ್ಯ ಕಲಾವಿದರು ಸಾಗುತ್ತಿದ್ದಾಗ ದೊಡ್ಡ ಆಲದ ಮರವೊಂದರ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು 25 ಮಂದಿ ಗಾಯಗೊಂಡಿರುವ ಘಟನೆ ಕಳೆದ ಮಧ್ಯರಾತ್ರಿ ಸಂಭವಿಸಿದೆ.