ವಿದೇಶಶ್ರೀಲಂಕಾ: ಪ್ರಧಾನಿ ನಿವಾಸದಲ್ಲಿನ 4,000 ಪುಸ್ತಕ, ಪಿಯಾನೋ ಬೆಂಕಿಗೆ ಆಹುತಿ!
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ನೆರೆಯ ದ್ವೀಪರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಜುಲೈ 9 ರಂದು ನಡೆಸಿದ ಪ್ರತಿಭಟನೆಯಲ್ಲಿ ಉದ್ರಿಕ್ತ ಗುಂಪೊಂದು ತಮ್ಮ ಖಾಸಗಿ ನಿವಾಸದಲ್ಲಿ ಬೆಂಕಿ ಹಚ್ಚಿದ್ದರಿಂದ 125 ವರ್ಷ ಹಳೆಯದಾದ ಪಿಯಾನೋ ಹಾಗೂ 4,000 ಪುಸ್ತಕಗಳು ನಾಶವಾಗಿರುವುದಾಗಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಹೇಳಿದ್ದಾರೆ.