ದೇಶ ಮಧ್ಯಪ್ರದೇಶ: ಬಿಜೆಪಿ ನಾಯಕಿ ಸನಾ ಖಾನ್ ಕೊಂದು ಶವವನ್ನು ನದಿಗೆ ಎಸೆದಿದ್ದ ಪತಿಯ ಬಂಧನ!
ನಾಗ್ಪುರ ಮೂಲದ ಬಿಜೆಪಿಯ ನಾಯಕಿ ಸನಾ ಖಾನ್ ಅವರನ್ನು ಕೊಂದ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಸನಾ ಖಾನ್ ತನ್ನ ಪತ್ನಿಯಾಗಿದ್ದು, ಹಣಕಾಸು ಮತ್ತು ವೈಯಕ್ತಿಕ ಸಮಸ್ಯೆಯಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಆತ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.