BMTC buses

BMTC ಬಸ್‌ಗಳಲ್ಲಿ QR ಕೋಡ್: ಸ್ಕ್ಯಾನಿಂಗ್‌ಗೆ ಸಿದ್ಧ, ಆದರೆ ಇಂಟರ್‌ನೆಟ್ ಕನೆಕ್ಷನ್ ಸಮಸ್ಯೆಯಿಂದ ಅಡ್ಡಿ!
ಅನೇಕ ಬಸ್‌ಗಳು ಈಗ ತಮ್ಮ ಸೈಡ್ ಪ್ಯಾನೆಲ್‌ಗಳಲ್ಲಿ ಕ್ಯೂಆರ್ ಕೋಡ್ ಪೋಸ್ಟರ್‌ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುತ್ತದೆ.

ಒಂದೇ ದಿನದಲ್ಲಿ ಮಾರ್ಗಮಧ್ಯೆಯೇ ಕೆಟ್ಟು ನಿಂತ 6 ಬಸ್: BMTC ಸೇವೆ ಗುಣಮಟ್ಟದ ಬಗ್ಗೆ ಕಳವಳ!
ಸೋಮವಾರ ಸುಮಾರು ಆರು ಬಸ್ ಗಳು ವಿವಿಧ ಸ್ಥಳಗಳಲ್ಲಿ ಕೆಟ್ಟು ನಿಂತು, ಟ್ರಾಫಿಕ್ ನಿಂದ ಹೈರಾಣಾಗಿದ್ದ ಪ್ರಯಾಣಕರಿಗೆ ಮತ್ತಷ್ಟು ಕಿರಿಕಿರಿ ನೀಡಿವೆ.

ಶೇ 58ರಷ್ಟು ಬಸ್‌ಗಳಲ್ಲಿ ಆಡಿಯೋ ಘೋಷಣೆ ವ್ಯವಸ್ಥೆ ಇದೆ: ಹೈಕೋರ್ಟ್‌ಗೆ ಬಿಎಂಟಿಸಿ ಮಾಹಿತಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕರ್ನಾಟಕ ಹೈಕೋರ್ಟ್‌ಗೆ ತನ್ನ ಶೇ 58 ರಷ್ಟು ಬಸ್‌ಗಳು ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ಆಡಿಯೋ ಘೋಷಣೆ ವ್ಯವಸ್ಥೆಯನ್ನು ಹೊಂದಿದೆ. ಆದರೆ, 2,562 ಬಸ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ ಎಂದು ಬುಧವಾರ ತಿಳಿಸಿದೆ.

'ಶಕ್ತಿ' ಪ್ರಭಾವ: ಪೀಕ್ ಅವರ್ ನಲ್ಲಿ ತಡವಾಗುತ್ತಿರುವ ಬಸ್ ಗಳ ಸಂಚಾರ, ಪ್ರಯಾಣಿಕರ ಅಳಲು
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್‌ಗಳು ತಡವಾಗಿ ಬರುತ್ತಿವೆ ಎಂದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ನಾಗರಿಕರು ಆರೋಪಿಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಂದ 2000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ಸೂಚನೆ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸಕೋಟೆ ಡಿಪೋ ಪ್ರಯಾಣಿಕರಿಂದ 2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿದ ನಂತರ, ಬಿಎಂಟಿಸಿ ಕೇಂದ್ರ ಕಚೇರಿ ಸಿಬ್ಬಂದಿಗೆ ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ ಎಂದು ನಿಗಮವು ಭಾನುವಾರ ಸ್ಪಷ್ಟಪಡಿಸಿದೆ.

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆದುಹಾಕಿ: ಸಿಎಫ್‌ಟಿಎಫ್‌ಕೆ
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 'ವಿಮಲ್ ಎಲೈಚಿ' ಜಾಹೀರಾತನ್ನು ಹಾಕುವುದನ್ನು ಆಕ್ಷೇಪಿಸಿ, ಸಾರ್ವಜನಿಕ ಆರೋಗ್ಯ ವಕೀಲರು ಮತ್ತು ಆರೋಗ್ಯ ಸೇವಾ ಸಂಘಗಳ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟವು ಬಸ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಿದೆ.

ಹೆಚ್ಚು ಸಂಖ್ಯೆಯಲ್ಲಿ ರಸ್ತೆಗಿಳಿಯದ ಬಿಎಂಟಿಸಿ: ಪ್ರಯಾಣಿಕರ ಪರದಾಟ
ಮಂಗಳವಾರದಿಂದ ಬಿಎಂಟಿಸಿ ಪಾಸ್ ದರವನ್ನು ತಗ್ಗಿಸಿ ಟಿಕೆಟ್ ವ್ಯವಸ್ಥೆ ಮಾಡಿದೆಯಾದರೂ ಸಮರ್ಪಕ ಬಸ್‌ಗಳನ್ನು ಮಾತ್ರ ಪೂರೈಸಿಲ್ಲ. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ನಗರದೆಲ್ಲೆಡೆ ಇಂದು ಕಂಡುಬಂತು.

ಕೈಯಲ್ಲಿ ಮುದ್ರೆ ಇದ್ದು ಬಸ್ ಗಳಲ್ಲಿ ಸಂಚರಿಸುವ, ರೆಸ್ಟೊರೆಂಟ್ ಗಳಲ್ಲಿರುವವರ ಬಗ್ಗೆ ಮಾಹಿತಿ ನೀಡಿ: ಭಾಸ್ಕರ್ ರಾವ್
ಕೈಯಲ್ಲಿ ಮುದ್ರೆ ಇದ್ದು, ಬಸ್ ಗಳಲ್ಲಿ ಸಂಚರಿಸುವ, ರೆಸ್ಟೋರೆಂಟ್ ಗಳಲ್ಲಿ ಕುಳಿತುಕೊಳ್ಳುವವರ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

