ವಿಜ್ಞಾನ-ತಂತ್ರಜ್ಞಾನಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ(BMD) 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!
ಭಾರತವು BMD ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಆರನೇ ರಾಷ್ಟ್ರವಾಗಿದೆ. US, UK, ಇಸ್ರೇಲ್, ರಷ್ಯಾ ಮತ್ತು ಚೀನಾದ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಸ್ವದೇಶಿ ನಿರ್ಮಿತ ರಕ್ಷಣಾ ವ್ಯವಸ್ಥೆ ಇದಾಗಿದ್ದು, 5 ಸಾವಿರ ಕಿಲೋ ಮೀಟರ್ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ.