ರಾಜ್ಯಸರ್ಕಾರದ ಮಧ್ಯಾಹ್ನ ಬಿಸಿಯೂಟದ ನರಕ ದರ್ಶನ ಮಾಡಿದ ತುಮಕೂರು ಶಾಲೆಯ ಬಾಲಕಿ: ಆಹಾರ ಧಾನ್ಯ ತುಂಬೆಲ್ಲಾ ಕಪ್ಪು ಹುಳಗಳು
ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ರಾಜ್ಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಶಾಲೆಯಿಂದ ಮಧ್ಯಾಹ್ನ ಬಿಸಿಯೂಟಕ್ಕೆ ವಿತರಿಸಿದ ಆಹಾರ ಧಾನ್ಯದಲ್ಲಿ ಕಪ್ಪು ಹುಳಗಳು ಸಿಕ್ಕಿವೆ. ಕೂಡಲೇ ಬಾಲಕಿಯ ಪೋಷಕರು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.