ರಾಜ್ಯಪಿಯು ಉಪನ್ಯಾಸಕರಿಂದ ಪ್ರತಿಭಟನೆ, ಪರೀಕ್ಷೆ ವೇಳೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರು
ವೇತನ ತಾರತಮ್ಯ ಹಾಗೂ ಮುಂಬಡ್ತಿ ಮೂಲಕ ಪ್ರಾಂಶುಪಾಲರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.